ಸೌಲಭ್ಯಗಳು - ಚಿಕ್ಕ ಸಭಾಂಗಣ

ಸಣ್ಣ ಸಮಾರಂಭಗಳಿಗೆ ಸೂಕ್ತವಾಗಿದೆ

ನಮ್ಮಲ್ಲಿರುವ ಮಿನಿ ಹಾಲ್ ಎಂಗೇಜ್ ಮೆಂಟ್, ನಾಮಕರಣ, ಬರ್ತ್ ಡೇ, ಉಪನಯನ ಹಾಗೂ ಇನ್ನಿತರ ಶುಭಸಮಾರಂಭಗಳಿಗೆ ಸೂಕ್ತವಾಗಿದೆ.

 

ಮುಖ್ಯ ಸಭಾಂಗಣವು ಕಾಯ್ದಿರಿಸಲ್ಪಟ್ಟದೆ ಇದ್ದಲ್ಲಿ ಈ ಸಭಾಂಗಣವನ್ನು ಪ್ರತ್ಯೇಕವಾಗಿ ಕಾಯ್ದಿರಿಸಬಹುದಾಗಿದೆ.

 

ಚಿಕ್ಕ ಸಭಾಂಗಣದ ಮುಖ್ಯಾಂಶಗಳು:

  1. ೨೫೦ ರಿಂದ ೩೦೦ ಜನ ಸೇರುವ ಸಮಾರಂಭಗಳಿಗೆ ಸೂಕ್ತವಾಗಿದೆ.
  2. ೨೦೦ ಜನರು ಆರಾಮವಾಗಿ ಕೂರುವಷ್ಟು ಸಭಾಂಗಣವು ದೊಡ್ಡದಾಗಿರುತ್ತದೆ.
  3. ೪೦೦ ಜನರು ಕೂರುವಷ್ಟು ದೊಡ್ಡದಾದ ಭೋಜನ ಮಂದಿರ.
  4. ಪರದೆಯನ್ನೊಳಗೊಂಡ ವೇದಿಕೆ.
  5. ೪ ಸುಂದರವಾದ ವಿ. ಐ. ಪಿ ಸೋಫಗಳ ವ್ಯವಸ್ಠೆ.
  6. ವೇದಿಕೆಯ ಮೇಲೆ ಗಂಡು – ಹೆಣ್ಣು ಕೂರುವ ಒಂದು ಸೋಫಾ.
  7. ೪೦೦ ಜನ ಕೂರುವ ಟೇಬಲ್ ಮತ್ತು ಆಸನಗಳುಳ್ಳ ಭೋಜನ ಮಂದಿರ.
  8. ೪ ಕೊಠಡಿಗಳ ವ್ಯವಸ್ಠೆ.
  9. ೪ ಕೊಠಡಿಗಳಿಗೂ ಹೊಂದಿಕೊಂಡಂತೆ ಶೌಚಾಲಯ ಹಾಗೂ ಬಿಸಿನೀರಿನ (ಗೀಸರ್ ) ಸೌಲಭ್ಯವಿದೆ.
  10. ಅಡಿಗೆ ಪಾತ್ರೆಗಳನ್ನು ಒದಗಿಸಿಕೊಡಲಾಗುವುದು.
  11. ಗ್ಯಾಸ್ ಸಂಪರ್ಕವುಳ್ಳ ಹಾಗೂ ಚಿಮಣಿ ಒಳಗೊಂಡ ೨ ಪ್ರತ್ಯೇಕ ಅಡಿಗೆ ಮನೆಗಳು ಮತ್ತು ಉಗ್ರಾಣ ಕೊಠಡಿ.
  12. ಕುಡಿಯಲು ಅಕ್ವಾಗಾರ್ಡ್ ನಿಂದ ಶುದ್ಧೀಕರಿಸಿದ ನೀರು, ಕಾವೇರಿ ಮತ್ತು ಬೋರ್ ವೆಲ್ ನೀರಿನ ಸೌಲಭ್ಯ.
  13. ಸಮಾರಂಭಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳು, ದೀಪಾಲೆ ಕಂಬ, ಒನಕೆ, ಹಸೆಮಣೆ, ತಟ್ಟೆಗಳು, ಹೋಮದ ಕುಂಡ ಇತ್ಯಾದಿ.
  14. ೨ ಗ್ರೈಂಡರ್ ಮೆಷೀನ್ ಗಳು, ೨ ದೋಸೆಕಲ್ಲುಗಳು, ಇಡ್ಲಿ ಪಾತ್ರೆಗಳು ಹಾಗೂ ೧ ಒಬ್ಬಟ್ಟು ಕಲ್ಲಿನ ವ್ಯವಸ್ಥೆ.
  15. ಸುರಕ್ಷತಾ ದೃಷ್ಟಿಯಿಂದ ಸುಮಾರು ೧೬ ಸಿ. ಸಿ. ಕ್ಯಾಮರಾಗಳ ವ್ಯವಸ್ಥೆ.
  16. ವ್ಯವಸ್ಥಾಪಕರು ಹಾಗೂ ಸೆಕ್ಯೂರಿಟಿ ಸೌಲಭ್ಯವಿದೆ.
  17. ವಾಹನ ನಿಲುಗಡೆಗೆ ವಿಶಾಲವಾದ ಜಾಗ.

 
 

ಒಂದು ಸಭಾಂಗಣವನ್ನು ಮಾತ್ರ ಒಂದು ದಿನಕ್ಕೆ ಕಾಯ್ದಿರಿಸಬಹುದಾಗಿದೆ.