ಸೌಲಭ್ಯಗಳು - ಮುಖ್ಯ ಸಭಾಂಗಣ

೨೦೦೦ ಜನ ಸೇರುವ ಸಮಾರಂಭಗಳಿಗೆ

ಕಲ್ಯಾಣ ಮಂಟಪದಲ್ಲಿ ಬಾಡಿಗೆಯೊಂದಿಗೆ ಸಿಗುವ ಸೌಲಭ್ಯಗಳು:

 

  1. ಸುಂದರವಾದ ಮತ್ತು ಆಕರ್ಷಣೀಯ ಮದುವೆ ಮಂಟಪ ಹಾಗೂ ಆರತಕ್ಷತೆಗೆ ವಿಶಾಲವಾದ ವೇದಿಕೆ.
  2. ೧೨ ಸುಂದರವಾದ ವಿ. ಐ. ಪಿ ಸೋಫಗಳ ವ್ಯವಸ್ಠೆ.
  3. ೬೦೦ ಜನ ಕೂರುವ ಸಭಾಂಗಣದಲ್ಲಿ ಆಸನಗಳ ವ್ಯವಸ್ಥೆ ಹಾಗೂ ನೀರಿನ ಕಾರಂಜಿಯ ವ್ಯವಸ್ಥೆ.
  4. ೪೦೦ ಜನ ಕೂರುವ ಟೇಬಲ್ ಮತ್ತು ಆಸನಗಳುಳ್ಳ ಭೋಜನ ಮಂದಿರ.
  5. ಸುಸಜ್ಜಿತವಾದ ೧೨ ಕೊಠಡಿಗಳು, ಗಂಡು, ಹೆಣ್ಣಿನ ಕೋಣೆಗಳಲ್ಲಿ ಆಲ್ಮೇರಾ (ಬೀರು), A/C ಹಾಗೂ ಡ್ರೆಸ್ಸಿಂಗ್ ರೂಮಿನ ವ್ಯವಸ್ಥೆ ಇದೆ.
  6. ೧೦ ಕೊಠಡಿಗಳು ೪ ಹಾಸಿಗೆಯ ವ್ಯವಸ್ಥೆ ಹೊಂದಿರುತ್ತದೆ.
  7. ೧೨ ಕೊಠಡಿಗಳಿಗೂ ಹೊಂದಿಕೊಂಡಂತೆ ಶೌಚಾಲಯ ಹಾಗೂ ಬಿಸಿನೀರಿನ (ಗೀಸರ್ ) ಸೌಲಭ್ಯವಿದೆ.
  8. ಪ್ರತ್ಯೇಕವಾದ ದೇವರ ಕೋಣೆಯ ಸೌಲಭ್ಯವಿದೆ.
  9. ಬಫೆ ಅಥವಾ ಇನ್ನಿತರೆ ಕಾರ್ಯಕ್ರಮಗಳಿಗಾಗಿ ಚಿಕ್ಕ ವೇದಿಕೆಯುಳ್ಳ ಹಸಿರು ವಾತಾವರಣದ ಕೋರ್ಟ್ ಯಾರ್ಡ್ ಸೌಲಭ್ಯ.
  10. ೨೦೦೦ ಜನರಿಗೆ ಬಡಿಸಲು ಬೇಕಾಗುವಷ್ಟು ಪಾತ್ರೆಗಳನ್ನು ನೀಡಲಾಗುವುದು.
  11. ೨ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗಳು (೧೯ ಕೆ. ಜಿ ).
  12. ಗ್ಯಾಸ್ ಸಂಪರ್ಕವುಳ್ಳ ಹಾಗೂ ಚಿಮಣಿ ಒಳಗೊಂಡ ೨ ಪ್ರತ್ಯೇಕ ಅಡಿಗೆ ಮನೆಗಳು ಮತ್ತು ಉಗ್ರಾಣ ಕೊಠಡಿ.
  13. ಕುಡಿಯಲು ಅಕ್ವಾಗಾರ್ಡ್ ನಿಂದ ಶುದ್ಧೀಕರಿಸಿದ ನೀರು, ಕಾವೇರಿ ಮತ್ತು ಬೋರ್ ವೆಲ್ ನೀರಿನ ಸೌಲಭ್ಯ.
  14. ಸಮಾರಂಭಕ್ಕೆ ಪೂಜಾ ಸಾಮಗ್ರಿಗಳು, ದೀಪಾಲೆ ಕಂಬ, ಒನಕೆ, ಹಸೆಮಣೆ, ತಟ್ಟೆಗಳು, ಹೋಮದ ಕುಂಡ ಇತ್ಯಾದಿ.
  15. ೨ ಗ್ರೈಂಡರ್ ಮೆಷೀನ್ ಗಳು, ೨ ದೋಸೆಕಲ್ಲುಗಳು, ಇಡ್ಲಿ ಪಾತ್ರೆಗಳು ಹಾಗೂ ೧ ಒಬ್ಬಟ್ಟು ಕಲ್ಲಿನ ವ್ಯವಸ್ಥೆ.
  16. ವಾದ್ಯಗೋಷ್ಠಿ ( ಆರ್ಕೇಷ್ಟ್ರಾ ) ಮತ್ತು ಸಂಗೀತ ಕಛೇರಿ ನಡೆಸಲು ನೀರಿನ ಕಾರಂಜಿಯುಳ್ಳ ಆಕರ್ಷಕ ವೇದಿಕೆ.
  17. ಸುರಕ್ಷತಾ ದೃಷ್ಟಿಯಿಂದ ಸುಮಾರು ೧೬ ಸಿ. ಸಿ. ಕ್ಯಾಮರಾಗಳ ವ್ಯವಸ್ಥೆ.
  18. ಅಗತ್ಯ ಸೌಲಭ್ಯಗಳಿಗೆ ಕೂಡಲೇ ಸ್ಪಂದಿಸುವ ವ್ಯವಸ್ಥಾಪಕರು ಹಾಗೂ ಸೆಕ್ಯೂರಿಟಿ ಸೌಲಭ್ಯವಿದೆ.
  19. ವಾಹನ ನಿಲುಗಡೆಗೆ ವಿಶಾಲವಾದ ಜಾಗ.

 
 

ಸಮಯ: ಸಂಜೆ ೫ ಗಂಟೆಯಿಂದ ಮರುದಿನ ೪ ಗಂಟೆಯವರೆಗೆ ಒಂದು ದಿನ ಎಂದು ಪರಿಗಣಿಸಲಾಗುವುದು.

 

 

ಹೆಚ್ಚುವರಿ ಖರ್ಚುಗಳು:

  • ಕ್ಲೀನಿಂಗ್
  • ವಿದ್ಯುತ್
  • ಗ್ಯಾಸ್ ಸಿಲಿಂಡರ್

 
 
 

ಒಂದು ಸಭಾಂಗಣವನ್ನು ಮಾತ್ರ ಒಂದು ದಿನಕ್ಕೆ ಕಾಯ್ದಿರಿಸಬಹುದಾಗಿದೆ

ಮುಖ್ಯ ಸಭಾಂಗಣವನ್ನು ಕಾಯ್ದಿರಿಸಿದರೆ ಚಿಕ್ಕ ಸಭಾಂಗಣವು ಸೇರಿರುತ್ತದೆ